RSS

Category Archives: ರಸ ಚೆನ್ನುಡಿ

ದಿನಕ್ಕೊಂದು ಚೆನ್ನುಡಿ ಸಂಗ್ರಹ

ರಸ ಚೆನ್ನುಡಿ

ಸೋಮಾರಿತನವು ಮಾನವರ ಶರೀರದೊಳಗೆ ಇರುವ ದೊಡ್ಡ ಶತ್ರು.ಸಕ್ರಿಯತೆಯೇ ಮಾನವರ ನಿಜ ಬಂಧು. ಕೆಲಸದಲ್ಲಿ ಮಗ್ನರಾದವರು ಎಂದಿಗೂ ಕೆಡುವುದಿಲ್ಲ. – ಸುಭಾಷಿತ ಮಂಜರಿ.

 
 

ರಸ ಚೆನ್ನುಡಿ

ನಮ್ಮ ಸಮಗ್ರ ವ್ಯಕ್ತಿತ್ವದಮೇಲೆ ನಮಗೆ ಸಂಪೂರ್ಣ ನಂಬಿಕೆ ಇರಬೇಕು.ನಮ್ಮ ಜೀವನದಲ್ಲಿ ಬರುವ ತೊಡಕುಗಳನ್ನೆಲ್ಲ ನಿವಾರಿಸುವ ಯಾವುದೋ ಒಂದು ಅದ್ಭುತ ಶಕ್ತಿ ನಮ್ಮ ಅಂತರ್ಯದಲ್ಲಿದೆಯೆಂದು ನಂಬಿ ಬದುಕಿನ ಹೋರಾಟವನ್ನು ಗೆಲ್ಲಬೇಕು. – ಅನಾಮಿಕ

 

ರಸ ಚೆನ್ನುಡಿ

ಭಯವೋ ಅಥವಾ ಸಂತೋಷವೋ ಆದಾಗ ಯಾವ ಮನುಷ್ಯ ವಿವೇಚನೆಯಿಂದ
ದುಡುಕಿಲ್ಲದೆ ಆ ಸಂದರ್ಭಕ್ಕೆ ಪ್ರತಿಕ್ರಿಯೆ ನೀಡುತ್ತಾನೋ ಅಂತಹ ಮನುಷ್ಯ ದುಃಖಕ್ಕೀಡಾಗುವುದಿಲ್ಲ – ಸುಭಾಷಿತ ಮಂಜರಿ

 

ರಸ ಚೆನ್ನುಡಿ

ಎತ್ತರಕ್ಕೆ ಹಾರಲು ದೊಡ್ಡದಾಗಿ ರೆಕ್ಕೆ ಬಿಚ್ಚುವ ಹಕ್ಕಿಯಂತೆ,ನಾವೂ ಸಹ ಜೀವನದಲ್ಲಿ ಎತ್ತರಕ್ಕೆ ಏರಲು ಮನಸ್ಸು ಬುದ್ಧಿಗಳೆಂಬ ರೆಕ್ಕೆಗಳನ್ನು ತೆರೆದುಕೊಳ್ಳಬೇಕು.ಎಷ್ಟು ಅಗಲವಾಗಿ ತೆರೆದು ಎತ್ತರಕ್ಕೆ ಹಾರಿದರೆ ನಮ್ಮ ಬದುಕು ಅಷ್ಟು ಉತ್ತಮವಾಗುತ್ತದೆ – ಅನಾಮಿಕ

 

ರಸ ಚೆನ್ನುಡಿ

ಒಂದು ಪೂರ್ವ ನಿರ್ಧಾರಿತ ಗುರಿಯಿಂದೇ ನಮ್ಮ ಜೀವನದ ಪಯಣ ನಡೆಯುತ್ತದೆ
ಈ ಪಯಣಕ್ಕೆ ನಾವು ಪಡೆದ ಟಿಕೆಟ್ ರದ್ದು ಪಡಿಸಲಾಗುವುದಿಲ್ಲ ಅಥವಾ ಪ್ರಯಾಣವನ್ನು ಮುಂದೂಡಲಾಗುವುದಿಲ್ಲ – ಅನಾಮಿಕ

 

ರಸ ಚೆನ್ನುಡಿ

ನಮ್ಮಿಂದ ಪರರಿಗೆ ಎಷ್ಟು ಉಪಕಾರವಾಯಿತು,
ನಮ್ಮಿಂದ ಅನ್ಯರು ಎಷ್ಟು ಸಂತಸ ಪಟ್ಟರು ಎನ್ನವುದೇ
ನಮ್ಮ ಜೀವನದ ಯಶಸ್ಸನ್ನು ಅಳೆಯುವ ಮಾಪನವಾಗುತ್ತದೆ – ಅನಾಮಿಕ

 

ರಸ ಚೆನ್ನುಡಿ

ಜೀವನದಲ್ಲಿ ಕೆಲವು ಪ್ರತಿಕೂಲ ಸಂದರ್ಭಗಳಲ್ಲಿ, ಹುಂಬತನದಿಂದ, ಅಹಂಕಾರದಿಂದ,
ಮೂರ್ಖತನದಿಂದ ಮುನ್ನುಗ್ಗಿ ಆಜೀವಪರ್ಯಂತ ಕೊರಗುವುದಕ್ಕಿಂಥಾ ವಿವೇಕದಿಂದ ಹಿಂಸರಿಯುವುದೇ ಉತ್ತಮ. -ಅನಾಮಿಕ